ಗೂಗಲ್ ಡ್ರೈವನಲ್ಲಿ ತನ್ನ ಪ್ರಿಯತಮೆ ಮತ್ತು ಪ್ರಿಯಕರಣ ಫೋಟೋವನ್ನು ಗುಪ್ತವಾಗಿ ಇಟ್ಟಿರುವ ಯುವಕ ಯುವತಿಯರೇ ಎಚ್ಚರ!?

0
59

ಸೖಬರ್ ಕಳ್ಳರಿದ್ದಾರೆ ಎಚ್ಚರ!???

SHIMOGA : ಜಿ ಮೇಲ್‌ ಹ್ಯಾಕ್‌ ಮಾಡಿದ್ದು ಗೂಗಲ್‌ ಡ್ರೈವ್‌ನಲ್ಲಿರುವ ಪ್ರಿಯತಮೆಯ ಫೋಟೊಗಳನ್ನು ಎಡಿಟ್‌ ಮಾಡಿ ಸ್ನೇಹಿತರು, ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಸಿ ಯುವಕನಿಂದ 4 ಲಕ್ಷ ರೂ. ಹಣ ವಸೂಲಿ ಮಾಡಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಯುವಕನ (ಹೆಸರು, ಊರು ಗೌಪ್ಯ) ವಾಟ್ಸಪ್‌ಗೆ ಅಪರಿಚಿತ ನಂಬರ್‌ನಿಂದ ಮೆಸೇಜ್‌ ಬಂದಿತ್ತು. ಜಿ ಮೇಲ್‌ ಹ್ಯಾಕ್‌ ಮಾಡಿದ್ದು, ಗೂಗಲ್‌ ಡ್ರೈವ್‌ನಲ್ಲಿರುವ ಪ್ರಿಯತಮೆ ಜೊತೆಗಿನ ಫೋಟೊಗಳನ್ನು ಎಡಿಟ್‌ ಮಾಡಿ ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಅಲ್ಲದೆ ಪದೇ ಪದೆ ಬೇರೆ ನಂಬರ್‌ಗಳಿಂದ ವಾಟ್ಸಪ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಮೆಸೇಜ್‌ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು.

ಹೆದರಿದ ಯುವಕ ಹಂತ ಹಂತವಾಗಿ 4 ಲಕ್ಷ ರೂ. ಹಣವನ್ನು ಬೆದರಿಕೆ ಒಡ್ಡಿದಾತ ತಿಳಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾನೆ. ಕೊನೆಗೆ ಯುವಕ ಪೊಲೀಸರ ಮೊರೆಗೆ ಹೋಗಿದ್ದಾನೆ.