ಶಿವಮೊಗ್ಗ: ಜೆಡಿಎಸ್ ಪಕ್ಷದ ಜಿಲ್ಲಾ ಯುವ ಕಾರ್ಯಾಧ್ಯಕ್ಷರಾಗಿ ಎಸ್.ಎಲ್. ನಿಖಿಲ್ ನೇಮಕವಾಗಿದ್ದಾರೆ.
ಇಂದು ಬೆಳಿಗ್ಗೆ ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ಎಸ್.ಎಲ್.ನಿಖಿಲ್ ಅವರಿಗೆ ನೇಮಕಾತಿ ಪತ್ರ ನೀಡಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ದಾದಾಪೀರ್, ಮಹಾ ಪ್ರಧಾನ

ಕಾರ್ಯದರ್ಶಿ ತ್ಯಾಗರಾಜ್, ನಗರಾಧ್ಯಕ್ಷ ಗೋವಿಂದಪ್ಪ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮಹಮ್ಮದ್ ಯೂಸಫ್, ಮುಖಂಡರಾದ ನರಸಿಂಹ ಗಂಧದಮನೆ, ದಿವ್ಯ ಪ್ರವೀಣ್, ದೀಪಕ್ ಸಿಂಗ್, ನೂಮನ್, ಸಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.