ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ: ಗೆಜ್ಜನೆಹಳ್ಳಿ ರಸ್ತೆ ದ್ವಿಚಕ್ರ ವಾಹನ ಮುಖಾಮುಖಿ ಅಪಘಾತ – ಒಬ್ಬ ಸಾವು, ಸಾರ್ವಜನಿಕರ ಆತಂಕ..!?

On: August 28, 2025 8:43 PM
Follow Us:
---Advertisement---

ಶಿವಮೊಗ್ಗ ನಗರದ ಗೆಜ್ಜನೆಹಳ್ಳಿ ಮುಖ್ಯ ರಸ್ತೆಯಲ್ಲಿ ಈಂದು ಸಂಭವಿಸಿದ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಭೀಕರ ಪರಿಣಾಮ ಬೀರಿದೆ. ಈ ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಕಳುಹಿಸಿದರು. ಆದರೆ ಗಾಯಗೊಂಡವರಲ್ಲಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೇ ದುರ್ಮರಣ ಹೊಂದಿರುವ ಮಾಹಿತಿ ಲಭ್ಯವಾಗಿದೆ.

ಅಪಘಾತ ಸಂಭವಿಸಿದ ಬಳಿಕ ದ್ವಿಚಕ್ರ ವಾಹನಗಳು ರಸ್ತೆಯ ಮಧ್ಯದಲ್ಲಿಯೇ ಬಿದ್ದಿದ್ದರಿಂದ ಸಾರ್ವಜನಿಕರು, ಪ್ರಯಾಣಿಕರು ಮತ್ತಷ್ಟು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿತ್ತು. ಸ್ಥಳೀಯರು ತಕ್ಷಣವೇ ವಿನೋಬ ನಗರ ಪೊಲೀಸ್ ಠಾಣೆಯ ಲ್ಯಾಂಡ್‌ಲೈನ್‌ಗೆ ಸಂಪರ್ಕಿಸಲು ಯತ್ನಿಸಿದರೂ, ಸಂಪರ್ಕ ದೊರಕಲಿಲ್ಲ. ಬಳಿಕ ಠಾಣೆಯ ಪೇದೆಯ  ಮೊಬೈಲ್ ನಂಬರ್ +91 76768 46777 ಗೆ ಕರೆಮಾಡಿ ಮಾಹಿತಿ ಹಂಚಿಕೊಂಡರು. ಆದರೆ ಕರೆ ಸ್ವೀಕರಿಸಿದ ಪೊಲೀಸಪ್ಪ “ಈ ನಂಬರ್ ನಿಮಗೆ ಕೊಟ್ಟವರು ಯಾರು?” ಎಂದು ಪ್ರಶ್ನೆ ಎತ್ತಿ, ವಿಷಯ ಗಂಭೀರವಾಗಿದ್ದರೂ ಸಾರ್ವಜನಿಕರ ಮೇಲೆಯೇ ಅವಾಜ್ ಹಾಕಿದ ಘಟನೆ ನಡೆದಿದೆ.

ಘಟನೆಯ ತೀವ್ರತೆಯನ್ನು ಮನಗಂಡ ಸಾರ್ವಜನಿಕರು ಜಿಲ್ಲಾ ರಕ್ಷಣಾಾಧಿಕಾರಿಗಳಿಗೆ ವಿಷಯ ತಿಳಿಸುವಂತೆ ಒತ್ತಾಯಿಸಿದರು. ಆದರೆ ಪೇದೆ “ಯಾರಿಗೆ ಬೇಕಾದರೂ ತಿಳಿಸಿ” ಎಂಬ ಉದ್ದಟ ನಿಲುವು ತಾಳಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ದ್ವಿಚಕ್ರ ವಾಹನಗಳು ರಸ್ತೆಯ ಮಧ್ಯದಲ್ಲಿ ಬಿದ್ದಿದ್ದರಿಂದ ಮತ್ತೊಂದು ಅನಾಹುತ ಸಂಭವಿಸಬಹುದಾದ ಆತಂಕ ಉಂಟಾಗಿತ್ತು.

ಸ್ಥಳೀಯರ ಮನವಿ ಮೇರೆಗೆ ವೃತ್ತ ನಿರೀಕ್ಷಕ ಸಂತೋಷ ಅವರು ತಕ್ಷಣವೇ ಕ್ರಮ ಕೈಗೊಂಡು ವಾಹನಗಳನ್ನು ತೆರವುಗೊಳಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಗೆ ನೆರವಾದರು.

ಈ ಘಟನೆ ಸಾರ್ವಜನಿಕರ ಮನಸ್ಸಿನಲ್ಲಿ ಪೊಲೀಸ್ ಇಲಾಖೆಯ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನೆ ಎಬ್ಬಿಸಿದೆ.

ತುರ್ತು ಸಂದರ್ಭಗಳಲ್ಲಿ ಸಹಾಯ ಕೋರುವ ನಾಗರಿಕರೊಂದಿಗೆ ಇಂತಹ ಅಸಹಕಾರ ಹಾಗೂ ಉದ್ದಟ ವರ್ತನೆ ಅಸ್ವೀಕಾರಾರ್ಹ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳ ಪೈಕಿ ಇದು ಮತ್ತೊಂದು ದುರ್ಘಟನೆ ಆಗಿದ್ದು, ಸಾರ್ವಜನಿಕರ ಜೀವ ರಕ್ಷಣೆಯ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡದವರ ಮೇಲೆ ಅವಾಜ್ ಹಾಕಿದರೆ ಜನ ಸ್ನೆಹಿ ಪೋಲಿಸ್ ಎಂಬ ಪದಕ್ಕೆ ಅರ್ಥವೆಲ್ಲಿರುತ್ತದೆ ಜಿಲ್ಲಾ ರಕ್ಷಣಾಧಿಕಾರಿಗಳೇ ಗಮನ ಹರಿಸಿ..?

Join WhatsApp

Join Now

Join Telegram

Join Now