ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಯಾವುದೇ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದಿಂದ ಸ್ಪಷ್ಟನೆ ನೀಡಲಾಗಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿರುವ ಬಗ್ಗೆ ಸುಳ್ಳು ಮಾಹಿತಿಯು ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ.
ರಾಜ್ಯ ಚುನಾವಣಾ ಆಯೋಗ ಯಾವುದೇ ವೇಳಾಪಟ್ಟಿ ಪ್ರಕಟಿಸಿರುವುದಿಲ್ಲ. ಆಯೋಗ ಸುದ್ದಿಗೋಷ್ಠಿ ಕರೆದು ಚುನಾವಣೆಯ ವೇಳಾಪಟ್ಟಿ ಪ್ರಕಟಿಸುತ್ತದೆ. ಪ್ರಸ್ತುತ ಹರಿದಾಡುತ್ತಿರುವ ಚುನಾವಣಾ ವೇಳಾಪಟ್ಟಿ ಸುಳ್ಳು ಮಾಹಿತಿಯಾಗಿದೆ. ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ರಾಜ್ಯ ಚುನಾವಣಾ ಆಯೋಗದಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಯಾವಾಗ ವೇಳಾಪಟ್ಟಿ ಪ್ರಕಟವಾಗಬಹುದ ಡಿಸೆಂಬರ್ನಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಂಡಳಿ ಅಧಿಕಾರ ಮುಕ್ತಾಯವಾಗಲಿದೆ 5. 2026ರ ಜನವರಿ ಅಂತ್ಯದೊಳಗೆ ಎಲ್ಲಾ 5,958 ಗ್ರಾಪಂಗಳ ಚುನಾವಣೆ ನಡೆಯಬೇಕು.